Translations:Policy:Universal Code of Conduct/18/kn

ಎಲ್ಲಾ ವಿಕಿಮೀಡಿಯಾ ಯೋಜನೆಗಳು, ಸ್ಥಳಗಳು ಮತ್ತು ಕಾರ್ಯಕ್ರಮಗಳಲ್ಲಿ, ನಡವಳಿಕೆಯನ್ನು ಗೌರವ, ನಾಗರಿಕತೆ, ಒಗ್ಗಟ್ಟು ಮತ್ತು ಉತ್ತಮ ಪೌರತ್ವದಲ್ಲಿ ಸ್ಥಾಪಿಸಲಾಗುತ್ತದೆ. ವಯಸ್ಸು, ಮಾನಸಿಕ ಅಥವಾ ದೈಹಿಕ ಅಸಾಮರ್ಥ್ಯಗಳು, ದೈಹಿಕ ನೋಟ, ರಾಷ್ಟ್ರೀಯ, ಧಾರ್ಮಿಕ, ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಜಾತಿ, ಸಾಮಾಜಿಕ ವರ್ಗ, ಭಾಷಾ ನಿರರ್ಗಳತೆ, ಲೈಂಗಿಕ ದೃಷ್ಟಿಕೋನ, ಲಿಂಗ ಗುರುತಿಸುವಿಕೆ, ಲಿಂಗ ಅಥವಾ ವೃತ್ತಿ ಕ್ಷೇತ್ರದ ಆಧಾರದ ಮೇಲೆ ವಿನಾಯಿತಿಗಳಿಲ್ಲದೆ, ಎಲ್ಲಾ ಕೊಡುಗೆದಾರರು ಮತ್ತು ಭಾಗವಹಿಸುವವರೊಂದಿಗಿನ ಅವರ ಸಂವಹನದಲ್ಲಿ ಭಾಗವಹಿಸುವವರಿಗೆ ಇದು ಅನ್ವಯಿಸುತ್ತದೆ. ವಿಕಿಮೀಡಿಯಾ ಯೋಜನೆಗಳು ಅಥವಾ ಮೂವ್ ಮೆಂಟ್ ಅಲ್ಲಿನ ಸ್ಥಾನಮಾನ, ಕೌಶಲ್ಯ ಅಥವಾ ಸಾಧನೆಗಳ ಆಧಾರದ ಮೇಲೆ ನಾವು ವಿನಾಯಿತಿಗಳನ್ನು ನೀಡುವುದಿಲ್ಲ.